ಇನ್ನೋವೇಟಿವ್ ಫ಼ಿಲಂಸಿಟಿಯಲ್ಲಿ ಮಳೆ ಬಂತು
Posted date: 16/June/2010

     ಆರ್.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀನಿವಾಸ್ ಅವರು ಅರ್ಪಿಸಿ ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿರುವ ‘ಮೈಲಾರಿ ಚಿತ್ರಕ್ಕೆ ಮೈಸೂರು ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
      ನಾಯಕ ಹಾಗೂ ನಾಯಕಿ ನಡುವಿನ ಪ್ರೇಮಮಯ ಸನ್ನಿವೇಶಗಳು ಮಾನಸ ಗಂಗೋತ್ರಿಯ ಆವರಣದಲ್ಲಿ ಚಿತ್ರೀಕರಣಗೊಂಡಿದೆ. ಶಿವರಾಜಕುಮಾರ್ ಮತ್ತು ಸದಾ ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಕಾಲೇಜು ವಿದ್ಯಾರ್ಥಿ ಪಾತ್ರ ನಿರ್ವಹಿಸುವುದಕಾಗಿ ಶಿವರಾಜಕುಮಾರ್ ೮ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ೪೯ರ ಹರಯದಲ್ಲೂ ಶಿವರಾಜಕುಮಾರ್ ಕಾಲೇಜು ಹುಡುಗರೇ ನಾಚುವಂತ ಮೈಕಟ್ಟು ಹೊಂದಿರುವುದು ನಿಜಕ್ಕೂ ಆಶ್ಚರ್ಯ.
      ‘ತಾಜ್‌ಮಹಲ್, ‘ಪ್ರೇಮ್‌ಕಹಾನಿ ಚಿತ್ರಗಳ ನಂತರ ಆರ್.ಚಂದ್ರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವಿಭಿನ್ನ ಕಥೆಯುಳ್ಳ ಈ ಚಿತ್ರ ನೊಡುಗರ ಮನಸೂರೆಗೊಳ್ಳಲಿದೆ ಎಂದು ನಿರ್ದೇಶಕರು ಅಭಿಪ್ರಾಯ ಪಡುತ್ತಾರೆ.
      ಗುರುಕಿರಣ್ ಸಂಗೀತ ಸಂಯೋಜನೆಯಿರುವ ‘ಮೈಲಾರಿಗೆ ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜ್‌ಕುಮಾರ್, ಸದಾ, ರವಿಕಾಳೆ, ರಂಗಾಯಣರಘು, ಸಂಜನಾ, ಸುರೇಶ್‌ಹುಬ್ಳಿಕರ್, ಗುರುಪ್ರಸಾದ್(ಮಠ), ಜಾನ್‌ಕೊಕೇನ್, ಸುರೇಶ್‌ಮಂಗಳೂರು, ರಾಜುತಾಳಿಕೋಟೆ, ಬುಲೆಟ್‌ಪ್ರಕಾಶ್, ಮೈಕೋನಾಗರಾಜ್, ಕುರಿ ಪ್ರತಾಪ್, ರಘುರಾಂ, ಕೋಟೆಪ್ರಭಾಕರ್, ವಿಶ್ವ ಮುಂತಾದವರಿದ್ದಾರೆ.
ಇನ್ನೋವೇಟಿವ್ ಫ಼ಿಲಂಸಿಟಿಯಲ್ಲಿ ಮಳೆ ಬಂತು
      ಬಿರು ಬೆಸಿಗೆಗೆ ತತ್ತರಿಸಿದ ಬೆಂಗಳೂರು ಹಾಗೂ ಅದರ ಸುತ್ತಲ್ಲಿನ ಪ್ರದೇಶದ ಜನತೆಯ ಮೇಲೆ ಕಳೆದ ಕೆಲ ದಿನಗಳಿಂದ ವರುಣ ಕೃಪೆ ತೋರಿದ್ದಾನೆ. ಬಿಡದಿ ಸಮೀಪದಲ್ಲಿರುವ ಇನ್ನೋವೇಟಿವ್ ಫ಼ಿಲಂಸಿಟಿಯಲ್ಲೂ ಮಳೆಯ ಸಿಂಚನ. ಆನಂದಕುಮಾರ್ ನಿರ್ದೇಶನದ  ‘ಪ್ರೈವೇಟ್ ನಂ ಚಿತ್ರದ ಹಾಡೊಂದು ಇನ್ನೋವೇಟಿವ್ ಫ಼ಿಲಂಸಿಟಿಯಲ್ಲಿ  ಚಿತ್ರೀಕರಣಗೊಂಡಿದೆ. ರಾಂನಾರಾಯಣ್ ಬರೆದಿರುವ ‘ಮಳೆ ಬಂತು ಮಳೆ ಮೆಲ್ಲನೆ‘ ಎಂಬ ಹಾಡಿಗೆ ಪ್ರೀತಂ ಹಾಗೂ ನಿಹಾರಿಕಸಿಂಗ್ ಲಕ್ಷ್ಮೀಅಯ್ಯರ್ ನೃತ್ಯ ನಿರ್ದೇಶನದಲ್ಲಿ ಹೆಜ್ಜೆ ಹಾಕಿದ್ದಾರೆ.
     ಕೆ.ಕಾಂತರಾಜ್ ಕನ್ನಲ್ ರಚನೆಯ ‘ಜಾನಿವಾಕರ್ ಸೈಟ್‌ನಲ್ಲಿ ಬಿಂದಾಸ್ ಫ಼ುಲ್ ಮೂಡಿನಲ್ಲಿ ಸೈಲೆನ್ಸು ಬೇಡ ಸೈಲೆನ್ಸು ಬೇಡ‘ ಎಂಬ ಚಿತ್ರದ ಮತ್ತೊಂದು ಗೀತೆಯ ಚಿತ್ರೀಕರಣ ರೆಸಿಡಿನ್ಸಿ ರಸ್ತೆಯ ಪ್ರಸಿದ್ದ ಕ್ಲಬ್‌ವೊಂದರಲ್ಲಿ ನಡೆದಿದೆ. ಇಮ್ರಾನ್ ನೃತ್ಯ ಸಂಯೋಜಿಸಿದ ಈ ಗೀತೆಯ ಚಿತ್ರೀಕರಣದಲ್ಲಿ ಪ್ರೀತಂ, ನಿಹಾರಿಕಸಿಂಗ್, ಕ್ಲೌಡಿಯಾ, ಶರಣ್, ಚಿದಾನಂದ್, ಶ್ರೀಲಕ್ಷ್ಮೀ ಭಾಗವಹಿಸಿದ್ದರು.
   ಎ.ಕೆ.ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಣೇಶ್‌ಶೆಟ್ಟಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಗಸ್ತ್ಯ ರವರ ಸಂಗೀತವಿದೆ. ಪ್ರೇಮಾನಂದ್ ಛಾಯಾಗ್ರಹಣ, ವೆಂಕಟೇಶ್‌ಪ್ರಸಾದ್ ಸಂಭಾಷಣೆ, ರಾಜೇಶ್ ಫ಼ಾರ್ನಾಂಡಿಸ್ ತಾಂತ್ರಿಕ ನಿರ್ದೇಶನ, ರಿಷಿಬಾರ್ನೆ ಅವರ
ಸಂಕಲನವಿರುವ ಚಿತ್ರದ ತಾರಾಬಳಗದಲ್ಲಿ ಪ್ರೀತಂ, ನಿಹಾರಿಕಸಿಂಗ್, ಕ್ಲೌಡಿಯಾ, ಶರಣ್, ಚಿದಾನಂದ್, ಶ್ರೀಲಕ್ಷ್ಮೀ, ಬ್ಯಾಂಕ್‌ಜನಾರ್ದನ್, ಅರಿಸಿಕೆರೆರಾಜು, ಕೆಂಪೇಗೌಡ, ರಾಜೇಶ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed